Tuesday, 16 April 2013

Posted by jinson on Tuesday, April 16, 2013 No comments
60672_558630137509940_1372411247_n 

ಪುನೀತ್ ರಾಜ್ ಕುಮಾರ್ ಕೇಳುವ 15 ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು ಕೋಟಿ ಗೆದ್ದಿರುವ “ಹುಸೇನ್ ಬಾಶಾ” “ಕೊಪ್ಪಳದ ಮುಸ್ಲಿಂ ಕೃಷಿಕ” ಕುಟುಂಬದ ಹುಡುಗ
“ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹೈಸ್ಕೂಲು ವ್ಯಾಸಂಗ, SSLC ಯಲ್ಲಿ First Class”.
ಆಮೇಲೆ ಓದು ಮುಂದುವರೆಸಲಾಗದೇ   “ಲಾರಿ ಕ್ಲಿನರ್ “  ಆಗಿದ್ದು ಟ್ರ್ಯಾಜಿಡಿ.  “ಡ್ರೈವರ್ ”   ಆಗಿ ಬಡ್ತಿ ಪಡೆದು ಅದರಿಂದ ಬಂದ ಹಣದಿಂದ ಕಾಲೇಜ್ ಫೀ ಕಟ್ಟಿ ಪಿಯುಸಿ ವ್ಯಾಸಂಗ ಮುಂದುವರೆಸಿದ.
ಈಗ ಗಂಗಾವತಿ ಸಮೀಪದ    “ಕಾರಟಗಿಯ C.M.N College ನಲ್ಲಿ First year Degree”   ಕಲಿಯುತ್ತಿರುವ   “ಹುಸೇನ್ ಗೆ IAS ಅಧಿಕಾರಿಯಾಗಬೇಕು” ಅನ್ನೋದು ಅವನ ಕನಸು ಮತ್ತು ಅದೇ ಗುರಿ ಕೂಡಾ…
“ಕರೋಡ್ ಪತಿ” ಏನಿಸಿಕೊಂಡ ಥ್ರಿಲ್ ನಲ್ಲೇ ತೇಲಾಡುತ್ತಿದ್ದ ಹುಸೇನ ಬಾಶಾ, “ಕರ್ಮೇಣ್ಯೇ” …..ಸಂಸ್ಕೃತ ಶ್ಲೋಕದ ಮೂಲಕ ಮಾತು ಆರಂಬಿಸಿದ್ದು ವಿಶೆಷ.
ಹೇಗೆನಿಸುತ್ತಿದೆ? ಎಂದು ಪ್ರಶ್ನಿಸಿದಾಗ
“ಗ್ರಾಮ ಪಂಚಾಯ್ತಿ ಸದಸ್ಯನನ್ನು ಪ್ರಧಾನ ಮಂತ್ರಿ ಮಾಡಿದರೆ ಹೇಗಿರುತ್ತೋ….ಹಾಗಾಗಿದೆ ನನ್ನ ಸ್ಥಿತಿ”   ಎಂದು ಜೋಕ್ ಮಾಡಿದ ಕನ್ನಡದ ಮೋಟ್ಟಮೋದಲ ಕೋಟ್ಯಾಧಿಪತಿ
ಇತಿಹಾಸ ಸೃಷ್ಟಿಸಿದ ಕೊಪ್ಪಳದ ” ಹುಸೇನ್ ಬಾಶಾ” ರ ಕಾರ್ಯಕ್ರಮ ದಿನಾಂಕ 29-04-2013. ಸೋಮವಾರ ಸುವರ್ಣವಾಹಿನಿ ಯಲ್ಲಿ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ
ತಪ್ಪದೇ ವೀಕ್ಷಿಸಿ.
Categories:

0 comments:

Post a Comment